ವಯನಾಡು(ಮಲಯಾಳಂ: വയനാട്) ಭಾರತದ ರಾಜ್ಯ ಕೇರಳದ ಈಶಾನ್ಯದಲ್ಲಿರುವ ಒಂದು ಜಿಲ್ಲೆಯಾಗಿದ್ದು, ಕಲ್ಪೆಟ್ಟಾ ಪುರಸಭೆಯಲ್ಲಿ ಆಡಳಿತ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಕೇರಳದ ಏಕೈಕ ಪ್ರಸ್ಥಭೂಮಿಯಾಗಿದೆ. ವಯನಾಡು ಜಿಲ್ಲೆಯ ಅತಿ ಎತ್ತರದ ಪ್ರದೇಶವಾಗಿದೆ. ಜಿಲ್ಲೆಯನ್ನು 1 ನವೆಂಬರ್ 1980 ರಂದು ಕೇರಳದ 12 ನೇ ಜಿಲ್ಲೆಯಾಗಿ ಕಲ್ಲಿಕೋಟೆ ಜಿಲ್ಲೆ ಮತ್ತು ಕಣ್ಣೂರು ಜಿಲ್ಲೆಗಳಿಂದ ಪ್ರದೇಶಗಳನ್ನು ಬೇರ್ಪಡಿಸಿ ರಚಿಸಲಾಯಿತು.ವಯನಾಡ್ನಲ್ಲಿ ಅನೇಕ ಮಸೀದಿಗಳಿವೆ. ವಯನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊಟ್ಟಮೊದಲಿನ ಕೆತ್ತನೆಗಳು ದೊರಕಿವೆ. == ವ್ಯುತ್ಪತ್ತಿ == 'ವಯನಾಡು' ಎಂಬ ಹೆಸರು ಮಲಯಾಳಂ ಭಾಷೆಯ 'ವಯಲ್ ನಾಡೊ' ನಿಂದ ಬಂದಿದೆ, ' ಭತ್ತದ ಹೊಲಗಳ ಭೂಮಿ' ಎಂಬುದು ಇದರ ಕನ್ನಡ ಅನುವಾದವಾಗಿದೆ. == ಸಸ್ಯ ಮತ್ತು ಪ್ರಾಣಿ == ವಯನಾಡಿನ ಮಣ್ಣು ಮತ್ತು ಹವಾಮಾನವು ವಾಣಿಜ್ಯ ಆಧಾರದ ಮೇಲೆ ತೋಟಗಾರಿಕೆಗೆ ಸೂಕ್ತವಾಗಿದೆ. ತರಕಾರಿಗಳ ಕೃಷಿಯನ್ನು ಉತ್ತೇಜಿಸಲು ಮತ್ತು ತೋಟಗಳನ್ನು ಸ್ಥಾಪಿಸಲು, ಕೇರಳದ ಕೃಷಿ ವಿಶ್ವವಿದ್ಯಾಲಯವು ಅಂಬಲವಾಯಲ್‌ನಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರವನ್ನು ನಡೆಸುತ್ತಿದೆ. == ಪ್ರಮುಖ ಪ್ರವಾಸಿ ತಾಣಗಳು == ಚೆಂಬ್ರ ಶಿಖರ - ಚಾರಣಕ್ಕೆ ಸೂಕ್ತವಾದದ್ದು. ಎಡಕಲ್ಲು ಗುಡ್ಡ ಅಥವಾ ಎಡಕಲ್ಲು ಗುಹೆ - ಇಲ್ಲಿ ೧೦೦೦ ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಮಧ್ಯಪ್ರಾಚೀನ ಶಿಲಾಯುಗದ ನಾಗರೀಕತೆಯ ಕುರುಹಾಗಿ ಈ ಗುಹೆಗಳ ಗೋಡೆಗಳ ಮೇಲೆ ಅನೇಕ ಕೆತ್ತನೆಗಳನ್ನು ಕಾಣಬಹುದು. ಇದನ್ನು ತಲುಪಲು ೧ ಕಿ.ಮೀ ಎತ್ತರದ ಗುಡ್ಡ ಹತ್ತಬೇಕಾಗುತ್ತದೆ. ಸುಲ್ತಾನ್ ಬತೇರಿ - ಟಿಪ್ಪುವಿನ ಕೋಟೆ ಎಂದೂ ಪ್ರಸಿದ್ಢ . ಇಲ್ಲಿ ಒಂದು ಹಳೆಯ ಜೈನ ದೇವಾಲಯವಿದೆ. ಟಿಪ್ಪು ಸುಲ್ತಾನನು ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ. ಮೀನುಮುಟ್ಟಿ ಜಲಪಾತ - ಇದನ್ನು ೨ ಕಿ.ಮೀ ಚಾರಣ ಹಾದಿಯ ಮೂಲಕ ತಲುಪಬೇಕು. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು, ೩೦೦ ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ. ಬಾಣಾಸುರಸಾಗರ ಅಣೆಕಟ್ಟು - ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ. ಪೂಕೋಟೆ ಅಥವಾ ಪೂಕೊಡೆ ಸರೋವರ - ಇದೊಂದು ಪ್ರಾಕೃತಿಕ ಸಿಹಿನೀರಿನ ಸರೋವರ. ವನಭೋಜನಕ್ಕೆ (ಪಿಕ್ನಿಕ್) ಗೆ ಹೇಳಿ ಮಾಡಿಸಿದ ತಾಣ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವಿಕಿಟ್ರಾವೆಲ್ ನಲ್ಲಿ ವಯನಾಡು ಜಿಲ್ಲೆ ಪ್ರವಾಸ ಕೈಪಿಡಿ (ಆಂಗ್ಲ) ಅಧಿಕೃತ ಜಾಲತಾಣ ವಯನಾಡ್ ಪ್ರವಾಸೋದ್ಯಮ ಅಧಿಕೃತ ವೆಬ್‌ಸೈಟ್ ://..//Pookode_Lake ://..///.?=2132066044